MSCHS Nirchal: MAHAJANA

MSCHS Nirchal: MAHAJANA


ನೀರಿನ ಶುದ್ಧೀಕರಣ ಘಟಕ ಕೊಡುಗೆ

Posted: 12 Dec 2014 03:17 AM PST


ಟೀಮ್ ನೀರ್ಚಾಲು ತಂಡದ ಪರವಾಗಿ ತಂಡದ ಪದಾಧಿಕಾರಿಗಳಾದ ಸತ್ಯನಾರಾಯಣ, ಪ್ರಶಾಂತ ಪೈ ಮತ್ತು ರವಿಕುಮಾರ್ ನಮ್ಮ ಶಾಲೆಗೆ 08.12.2014 ಸೋಮವಾರ ನೀರಿನ ಶುದ್ಧೀಕರಣ ಘಟಕವನ್ನು ಮತ್ತು ಕ್ರೀಡೆಯಲ್ಲಿ ಪ್ರತಿಭಾಶಾಲಿಗಳಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ನೀಡಿದರು. ಶಾಲೆಯ ಪರವಾಗಿ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವೀಕರಿಸಿದರು. ಧನ್ಯವಾದಗಳು...

ಸಾಕ್ಷರ 2014 - ಸಮಾರೋಪ

Posted: 12 Dec 2014 02:01 AM PST


``ಅಧ್ಯಾಪಕರು ಹೇಳಿದ ವಿಷಯಗಳನ್ನು ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತು ಉತ್ತಮ ಪ್ರಜೆಯಾಗಿ ಬಾಳಿ" ಎಂದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಣ್ಣ ಸೀತಂಗೋಳಿ ನುಡಿದರು. ಅವರು ನಮ್ಮ ಶಾಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಜರಗುತ್ತಿದ್ದ ಸಾಕ್ಷರ ತರಗತಿಯ ಸಮಾರೋಪ ಸಮಾರಂಭವನ್ನು ಕಳೆದ ವಾರ ನಿರ್ವಹಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಕ್ಕಳು ತಮ್ಮ ವಿವಿಧ ರೀತಿಯ ಪ್ರತಿಭೆಗಳನ್ನು ಪ್ರದರ್ಶಿಸಿದರು. ಹಿರಿಯ ಅಧ್ಯಾಪಕರಾದ ಶ್ರೀ ವೆಂಕಟರಾಜ ಸಿ. ಯಚ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಹಿರಿಯ ಅಧ್ಯಾಪಿಕೆ ಶ್ರೀಮತಿ ಮೀನಾಕ್ಷಿ ಯಚ್.ಯನ್ ಸ್ವಾಗತಿಸಿ, ಶ್ರೀಮತಿ ಶೈಲಜಾ. ಎ ಟೀಚರ್ ವಂದಿಸಿದರು. ಶ್ರೀಯುತ ಶಿವಕುಮಾರ. ಯಚ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸ್ವಾಗತ ರೈ. ಬಿ - ಜಿಲ್ಲಾ ಮಟ್ಟಕ್ಕೆ ಆಯ್ಕೆ.

Posted: 12 Dec 2014 12:44 AM PST


ಬೆಳ್ಳೂರಿನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಇಂಗ್ಲಿಷ್ ಉಪನ್ಯಾಸ, ಇಂಗ್ಲಿಷ್ ಕಂಠಪಾಠ ಮತ್ತು ಕನ್ನಡ ಭಾಷಣ ಸ್ಪರ್ಧೆಗಳಲ್ಲಿ 'ಎ'ಗ್ರೇಡ್ ಮತ್ತು ಪ್ರಥಮ ಸ್ಥಾನ ಪಡೆದ ಸ್ವಾಗತ ರೈ. ಬಿ. ಚೆರ್ವತ್ತೂರಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾಳೆ. ಈಕೆ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮತ್ತು ಶಿಕ್ಷಕ ದಂಪತಿಗಳಾದ ಸೀತಾಂಗೋಳಿ ನಿವಾಸಿ ಚಂದ್ರಶೇಖರ ರೈ ಮತ್ತು ಚಂದ್ರಾವತಿ.ಬಿ ಇವರ ಪುತ್ರಿ.

No comments:

Post a Comment

Previous Page Next Page Home