09-01-2015
ಏರ್ ರೈಸ್ ಆರ್ಟ್ಸ್ ಏಂಡ್ ಸ್ಪೋರ್ಸ್ಸ್ ಕ್ಲಬ್ ಮಾಣಿಮೂಲೆ- ವಾರ್ಷಿಕೋತ್ಸವ.
ಮಾಣಿಮೂಲೆಃಆರೋಗ್ಯಪೂರ್ಣ ಶರೀರದಲ್ಲಿ ಅರೋಗ್ಯಕರವಾದ ಚಿಂತನೆಗಳು ಮೂಡುತ್ತವೆ. ಇವು ಸಮಾಜದಲ್ಲಿಸ್ವಾಸ್ಥ್ಯಜೀವನಕ್ಕೆ ಪೂರಕ. ಯಾವುದೇ ಜಾತಿ,ಭಾಷೆ,ರಾಜಕೀಯವಿಲ್ಲದೆ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಸಂಘಗಳು ಉತ್ತಮ ಸಮಾಜದ ನಿರ್ಮಾಣದ ಅಡಿಗಲ್ಲು. ಯುವಪೀಳಿಗೆಯವರನ್ನು ಪ್ರೋತ್ಸಾಹಿಸುವ ಸಂಘಟನೆಗಳು ಸಮಾಜಕ್ಕೆ ಉತ್ತಮ ಮಾರ್ಗದರ್ಶನವನ್ನು ನೀಡುವಂತಾಗಲಿ ಎ೦ಬ ಸಂದೇಶದೊಂದಿಗೆ ಮಾಣಿಮೂಲೆ ಶಾಲಾ ವಠಾರದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಲಾಯಿತು. ಏರ್ ರೈಸ್ ಆರ್ಟ್ಸ್ ಏಂಡ್ ಸ್ಪೋರ್ಟ್ಸ್ ಕ್ಲಬ್ಬ್ ಮಾಣಿಮೂಲೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಇದನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷರಾದ ವಿ.ಕೆ.ಕುಮಾರನ್ ವಹಿಸಿದ್ದರು. ಕೆ.ಆರ್.ವೇಣು, ನೀಲಕಂಠನ್, ಭೋಜಪ್ಪ ಗೌಡ, ವಿಜಯಕುಮಾರ್ ಪಾಲಾರ್, ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕೆ.ಎ೦.ಕುಮಾರನ್,ಗೋಪಾಲನ್ ಶುಭಾಶಂಸನೆಗೈದರು.
ಕೇರಳೋತ್ಸವದಲ್ಲಿ ಬಹುಮಾನ ಗಳಿಸಿದ ಕ್ಲಬ್ಬಿನ ಸದಸ್ಯರಾದ ಅನೀಶ್ ಮತ್ತು ಇಕ್ಬಾಲ್ ಇವವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ವಿಜೇಶ್ ಸ್ವಾಗತಿಸಿ, ಅನೀಶ್ ಟಿ.ಆರ್ ವಂದಿಸಿದರು. ವಿ.ಕುಮಾರ್ ನಿರೂಪಣೆಗೈದರು