ಸಾಹಿತಿ ಕೆ.ವಿ.ತಿರುಮಲೇಶ್ ಇವರಿಂದ ಗೌರವ ಸಮರ್ಪಣೆ Posted: 28 Mar 2016 03:10 AM PDT
ಪ್ರಸಿದ್ಧ ಸಾಹಿತಿ, ಶಿಕ್ಷಣ ತಜ್ಞ ಕೆ.ವಿ. ತಿರುಮಲೇಶ್ ತಮಗೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವನ್ನು ತಾವು ಪ್ರೌಢ ಶಿಕ್ಷಣವನ್ನು ಪೂರೈಸಿದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗೆ ಸಮರ್ಪಿಸಲಿದ್ದಾರೆ. 30.03.2016 ಬುಧವಾರ ಅಪರಾಹ್ನ 4 ಗಂಟೆಗೆ ನಮ್ಮ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ à²à²Ÿ್ ವಹಿಸಲಿದ್ದಾರೆ. ಈ ಸಂದರ್à²à²¦à²²್ಲಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಪಡಿಯಡ್ಪು ಶಂಕರ à²à²Ÿ್ಟರು ಕೆ.ವಿ.ತಿರುಮಲೇಶರನ್ನು ಅà²ಿನಂದಿಸಲಿದ್ದಾರೆ. ಶಾಲಾ ಹಳೆ ವಿದ್ಯಾರ್ಥಿ, ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಶುಠಹಾರೈಸಲಿದ್ದಾರೆ. |