MSCHS Nirchal: MAHAJANA

MSCHS Nirchal: MAHAJANA


ವಿದ್ಯಾರ್ಥಿಗಳಿಂದ ಗದ್ದೆಗೆ ಭೇಟಿ

Posted: 05 Jul 2017 04:14 AM PDT


ಸಾಂಪ್ರದಾಯಿಕವಾಗಿ ಭತ್ತದ ಬೇಸಾಯವನ್ನು ಮಾಡುತ್ತಿರುವ ಬೇಳ ಸುಬ್ರಹ್ಮಣ್ಯ ಅಡಿಗರ ಭತ್ತದ ಗದ್ದೆಯನ್ನು ನಮ್ಮ ಶಾಲಾ ವಿದ್ಯಾರ್ಥಿಗಳು ಇಂದು ಸಂದರ್ಶಿಸಿ ಭತ್ತದ ಬೆಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಶಾಲಾ ಅಧ್ಯಾಪಕರಾದ ಕೃಷ್ಣಪ್ರಸಾದ್ ಬಣ್ಪುತ್ತಡ್ಕ, ನಂದಕುಮಾರ್, ಅವಿನಾಶ ಕಾರಂತ ಪಾಡಿ, ಶ್ರೀಮತಿ ಮಾಲತಿ, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಪೂರ್ಣಿಮಾ ಮತ್ತು ಶ್ರೀಮತಿ ಸುಧಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ತರಗತಿಯೊಳಗೆ ವಸ್ತು ಪ್ರದರ್ಶನ

Posted: 05 Jul 2017 04:18 AM PDT


ಹೊಸತಾಗಿ ನಮ್ಮ ಶಾಲೆಗೆ ಕಾಲಿರಿಸಿದ ವಿದ್ಯಾರ್ಥಿಗಳು ಪ್ರಾಚೀನ ವಸ್ತುಗಳ ಕಡೆಗೆ ಗಮನ ನೀಡಿ ಅದನ್ನು ಅಕ್ಕರೆಯಿಂದ ಶಾಲೆಗೆ ಹೊತ್ತು ತಂದು ಇಂದು ತರಗತಿಯಲ್ಲಿ ಪ್ರದರ್ಶಿಸಿ ಸಂತಸಪಟ್ಟುಕೊಂಡರು. ಹಳೆಯ ಕಾಲದ ನಾಣ್ಯಗಳು, ಅಳತೆ ಪಾತ್ರೆಗಳು, ಉಪ್ಪಿನ ಮರಿಗೆ... ಇತ್ಯಾದಿ ವಸ್ತುಗಳನ್ನು ಕಂಡವರಿಗೆ ಪ್ರದರ್ಶಿಸುವ ಕುತೂಹಲ, ನೋಡದವರಿಗೆ ವೀಕ್ಷಿಸುವ ಕುತೂಹಲ. ಇಂದು ಐದನೇ ತರಗತಿಯಲ್ಲಿ ಇಂತಹ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಜರಗಿತು.

ಯೋಗ ದಿನಾಚರಣೆ

Posted: 06 Jul 2017 02:24 AM PDT



ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್.ಪಿ.ಎಚ್ ಇವರ ನೇತೃತ್ವದಲ್ಲಿ ಇಂದು ಯೋಗ ದಿನಾಚರಣೆ ನಡೆಯಿತು. ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಉದ್ಘಾಟಿಸಿದರು. ಶಾಲಾ ಹಿರಿಯ ಶಿಕ್ಷಕ ಎಚ್.ಸೂರ್ಯನಾರಾಯಣ ಸಭಾಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕೃಷ್ಣಪ್ರಸಾದ.ಟಿ ಕಾರ್ಯಕ್ರಮ ನಿರೂಪಿಸಿದರು.

ಎಡನೀರು ಯಕ್ಷಗಾನ ಶಿಬಿರ ಸಂದರ್ಶನ

Posted: 06 Jul 2017 02:28 AM PDT


ಎಡನೀರು ಮಠದ ಆವರಣದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ತರಬೇತಿ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿಯನ್ನು ಇಂದು ಮಕ್ಕಳೊಂದಿಗೆ ವೀಕ್ಷಿಸಿ ಬಂದೆವು. ಶಾಲಾ ಬಸ್ಸಿನಲ್ಲಿ ಎಡನೀರಿಗೆ ತೆರಳಿ ಅಲ್ಲಿನ ಶಿಬಿರವನ್ನು ನೋಡಿ, ಸಂದೇಹವನ್ನು ಪರಿಹರಿಸಿ ಹಿಂತಿರುಗಿದಾಗ ಮಕ್ಕಳಿಗೆ ಅಪಾರ ಖುಷಿಯಾಯಿತು.

No comments:

Post a Comment

Previous Page Next Page Home