SWAMIJI'S H.S.S.EDNEER

SWAMIJI'S H.S.S.EDNEER


ಎ ಸ್ಸಿ ಮಕ್ಕಳಿಗೆ ಮೇಜು ಹಾಗೂ ಕುರ್ಚಿ ವಿತರಣೆ ......

Posted: 12 Feb 2015 10:32 AM PST

10-02-2015 ನೇ ಮಂಗಳವಾರ ನಮ್ಮ ಗ್ರಾಮ ಪಂಚಾಯತ್ ವತಿಯಿಂದ ಶಾಲೆಯ 8,9 ಹಾಗೂ 10ನೇ  ತರಗತಿಯಲ್ಲಿ ಕಲಿಯುತ್ತಿರುವ  36  ಎಸ್ಸಿ (SC) ಮಕ್ಕಳಿಗೆ ಮೇಜು ಹಾಗೂ ಕುರ್ಚಿಯನ್ನು ವಿತರಿಸಲಾಯಿತು ...ಮೊದಲು ನಡೆದ ಸಭೆಯಲ್ಲಿ  ಹಿರಿಯ ಅಧ್ಯಾಪಿಕೆ ಶಾಂತ ಕುಮಾರಿ ಟೀಚರ್  ಎಲ್ಲರನ್ನು ಸ್ವಾಗತಿಸಿದರು.. ಶಾಲಾ ಮುಖ್ಯಶಿಕ್ಸಕಿಯವರು ಪಂಚಾಯತ್ ನ ಈ ಯೋಜನೆಯನ್ನು ಶ್ಲಾಘಿಸಿದರು..ಸಭೆಯಲ್ಲಿ ಶಾಲಾ ಪಿ .ಟಿ .ಎ  ಅಧ್ಯಕ್ಷರು ,ಎಸ್. ಅರ್ . ಜಿ ಸಂಚಾಲಕರು ,ಎಲ್ಲಾ ಶಿಕ್ಷಕರು, ಸಿಬ್ಬಂಧಿವರ್ಗ, ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು ... 

"ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ"

Posted: 12 Feb 2015 09:51 AM PST

10-02-2015 ನೇ  ಮಂಗಳವಾರ  ಕೇರಳ ಅರಣ್ಯ ಹಾಗೂ ವನ್ಯಮೃಗ ಸಂರಕ್ಷಣಾ  ಇಲಾಖೆಯ ವತಿಯಿಂದ " ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ" ಎಂಬ ವಿಷಯದ ಕುರಿತು ಮಕ್ಕಳಿಗೆ  ವಿಚಾರ ಗೋಷ್ಠಿ ಯನ್ನು ಹಮ್ಮಿ ಕೊಳ್ಳಲಾಯಿತು... ಈ  ವಿಚಾರ ಗೋಷ್ಠಿಯಲ್ಲಿ  ಜಿಲ್ಲಾ ಅರಣ್ಯಾಧಿಕಾರಿ ಶ್ರೀ ಮುರಳೀಧರನ್ ರವರು ಹಾಜರಿದ್ದು ,ಸಂಪನ್ಮೂಲ ವ್ಯಕ್ತಿ ಶ್ರೀ ಭಾಸ್ಕರ ಬೆಳ್ಳೂರು ರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು..

No comments:

Post a Comment

Previous Page Next Page Home