MSCHS Nirchal: MAHAJANA

MSCHS Nirchal: MAHAJANA


ಥ್ರೋ ಬಾಲ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Posted: 10 Dec 2015 04:46 AM PST

    ನಮ್ಮ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿ ಶುಭರಾಜ್. ಕೆ 16 ವರ್ಷಕ್ಕಿಂತ ಕೆಳಗಿನ ಹುಡುಗರಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯಲಿರುವ ಥ್ರೋ ಬಾಲ್ ಪಂದ್ಯಾಟದಲ್ಲಿ ಕೇರಳ ರಾಜ್ಯದ ತಂಡವನ್ನು ಪ್ರತಿನಿಧಿಸಿ ಆಡಲು ಆಯ್ಕೆಯಾಗಿದ್ದಾನೆ. ಈತ ಕನ್ನೆಪ್ಪಾಡಿ ನಿವಾಸಿ ಬಾಲಕೃಷ್ಣ. ಪಿ ಮತ್ತು ಕುಸುಮಾ ಇವರ ಪುತ್ರ. ನಮ್ಮ ಶಾಲೆಯ ಶಾರೀರಿಕ ಶಿಕ್ಷಕ ಎಂ.ಸೂರ್ಯನಾರಾಯಣ ಇವರಿಂದ ಈತ ತರಬೇತಿ ಪಡೆಯುತ್ತಿದ್ದಾನೆ.

ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Posted: 10 Dec 2015 04:44 AM PST

   ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಧನುಷಾ.ಬಿ 16 ವರ್ಷಕ್ಕಿಂತ ಕೆಳಗಿನ ಹುಡುಗಿಯರಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾಟದಲ್ಲಿ ಕೇರಳ ರಾಜ್ಯದ ತಂಡವನ್ನು ಪ್ರತಿನಿಧಿಸಿ ಆಡಲು ಆಯ್ಕೆಯಾಗಿದ್ದಾಳೆ. ಈಕೆ ಬೇಳ ಕಟ್ಟತ್ತಂಗಡಿ ನಿವಾಸಿ ಮಾಧವ.ಬಿ ಮತ್ತು ಲಕ್ಷ್ಮಿ. ಕೆ.ಬಿ ಇವರ ಪುತ್ರಿ. ನಮ್ಮ ಶಾಲೆಯ ಶಾರೀರಿಕ ಶಿಕ್ಷಕ ಎಂ.ಸೂರ್ಯನಾರಾಯಣ ಇವರಿಂದ ಈಕೆ ತರಬೇತಿ ಪಡೆಯುತ್ತಿದ್ದಾಳೆ.

No comments:

Post a Comment

Previous Page Next Page Home