MSCHS Nirchal: MAHAJANA

MSCHS Nirchal: MAHAJANA


‘ರನ್ ಕೇರಳ ರನ್’

Posted: 19 Jan 2015 11:32 PM PST


"ಆಧುನಿಕ ಜಗತ್ತಿನಲ್ಲಿ ಶಾರೀರಿಕ ವ್ಯಾಯಾಮ ಕಡಿಮೆಯಾಗುತ್ತಿದ್ದು, ಇದು ಆರೋಗ್ಯವನ್ನು ವ್ಯತಿರಿಕ್ತವಾಗಿ ಬಾಧಿಸುತ್ತಿದೆ. ಅರೋಗ್ಯಕರ ಸಮಾಜದ ನಿರ್ಮಾಣದಲ್ಲಿ ದೈಹಿಕ ಕ್ರೀಡೆಗಳ ಮಹತ್ವವೂ ಅಧಿಕವಾಗಿದ್ದು ಈ ನಿಟ್ಟಿನಲ್ಲಿ ಕೇರಳ ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ಈ ತಿಂಗಳ ಅಂತ್ಯಕ್ಕೆ ಕೇರಳದಲ್ಲಿ ಜರಗುವ ರಾಷ್ಟ್ರೀಯ ಗೇಮ್ಸ್ ಯಶಸ್ವಿಯಾಗಲಿ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ 'ರನ್ ಕೇರಳ ರನ್' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಎಂ.ಸೂರ್ಯನಾರಾಯಣ ಪ್ರತಿಜ್ಞೆಯನ್ನು ಬೋಧಿಸಿದರು. ಶಾಲಾ ಹಿರಿಯ ಶಿಕ್ಷಕಿ ಎ.ಭುವನೇಶ್ವರಿ ಸ್ವಾಗತಿಸಿದರು, ಶಿಕ್ಷಕಿ ವಾಣಿ.ಪಿ.ಎಸ್ ವಂದಿಸಿದರು.

No comments:

Post a Comment

Previous Page Next Page Home