Govt Higher Secondary School Mangalpady

Govt Higher Secondary School Mangalpady


Posted: 04 Jan 2015 07:58 AM PST

ದ್ವಿತೀಯ ಸೋಪಾನ ಪರೀಕ್ಷೆ

ಕೇರಳ ರಾಜ್ಯ ಭಾರತ್ ಸ್ಕೌಟ್ಸ ಮತ್ತು ಗೈಡ್ಸ್ಸ ಸ್ಕೌಟುಗೈಡುಗಳಿಗಾಗಿ ನಡೆಸುವ ದ್ವಿತೀಯ ಸೋಪಾನ ಪರೀಕ್ಷಾ ಶಿಬಿರ ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಜರಗಿತು. ಮಂಜೇಶ್ವರ ಉಪಜಿಲ್ಲೆಯ ವಿವಿಧ ಶಾಲೆಗಳಿಂದ ಭಾಗವಹಿಸಿದ ನಲ್ವತ್ತು ಸ್ಕೌಟುಗೈಡುಗಳಿಗೆ ಪ್ರಾರ್ಥನೆ, ಧ್ವಜಗೀತೆ, ಪ್ರತಿಜ್ಞೆ, ನಿಯಮ, ಗಂಟುಗಳು, ಪ್ರಥಮ ಚಿಕಿತ್ಸೆ, ಅಂದಾಜು ಮಾಡುವುದು, ಸಿಗ್ನಲಿಂಗ್ ಇತ್ಯಾದಿಗಳಲ್ಲಿ ಪರೀಕ್ಷೆ ನಡೆಸಲಾಯಿತು. ಗುರುಮೂರ್ತಿ ನಾಯ್ಕಾಪು ಪ್ರಧಾನ ಪರೀಕ್ಷಕರಾಗಿ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪೀಟರ್ ರೋಡ್ರಿಗಸ್ ಕಯ್ಯಾರು , ಸ್ಕೌಟು ಅಧ್ಯಾಪಕರಾದ ರೋಮನ್ ಡಿಸೋಜ ಕಳಿಯೂರು, ಲಕ್ಷ್ಮೀದಾಸ್ ಮಂಜೇಶ್ವರ, ಗೈಡ್ ಅಧ್ಯಾಪಿಕೆ ಆಶಾಲತ ಮಂಗಲ್ಪಾಡಿ, ಸಿಸ್ಟರ್ ಮೊಂತಿ ಪರೀಕ್ಷಕರಾಗಿ ಸಹಕರಿಸಿದರು.

No comments:

Post a Comment

Previous Page Next Page Home