‘ಮಹಾಜನ ವಾಣಿ’ ವಾರ್ಷಿಕ ಸಮಾರೋಪ Posted: 27 Feb 2019 03:23 AM PST
"ಉತ್ತಮ ವರದಿಗಾರನೊಬ್ಬನಿಗೆ ಭೂತ ಭವಿಷ್ಯ ವರ್ತಮಾನಗಳ ಕಲ್ಪನೆಯಿದ್ದು ವರದಿಗಾರಿಕೆಯಲ್ಲಿ ತನ್ನತನವನ್ನು ಬೆಳೆಸಿಕೊಂಡರೆ ಉಜ್ವಲಭವಿಷ್ಯ ಕಂಡುಕೊಳ್ಳಬಹುದು"ಎಂದು ವಿಜಯವಾಣಿ ಪತ್ರಿಕೆಯ ವರದಿಗಾರ ಪುರುಷೋತ್ತಮ ಭಟ್ ಪುದುಕೋಳಿ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಮಧ್ಯಾಹ್ನದ ಶಾಲಾ ಅವಧಿಯ ಸದುಪಯೋಗಕ್ಕಾಗಿ ಪ್ರಸಾರವಾಗುವ 'ಮಹಾಜನವಾಣಿ' ಎಂಬ ರೇಡಿಯೋ ಕಾರ್ಯಕ್ರಮದ ಸಮಾಪನ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟರಾಜ ಸಿ. ಯಚ್ ಹಾಗು ಹಿರಿಯ ಅಧ್ಯಾಪಿಕೆಯಾದ ಶ್ರೀಮತಿ ವಾಣಿ ಪಿ.ಯಸ್ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ಹರ್ಷಿತ ಸ್ವಾಗತಿಸಿ ಕೃಪಾನಿಧಿ.ಕೆ ವಂದಿಸಿದರು. ವಿದ್ಯಾರ್ಥಿನಿಯರಾದ ಅದಿತಿ.ಕೆ ಮತ್ತು ಅನುಪ್ರಿಯ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಭಾಷಾ ಅಧ್ಯಾಪಕರಾದ ವಿಶ್ವನಾಥ ಭಟ್, ನಂದಕುಮಾರ, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಶೈಲಜಾ. ಎ, ಶ್ರೀಮತಿ ಗಾಯತ್ರಿ, ಶ್ರೀಮತಿ ಸುನಿತಾ ಮೊದಲಾದವರು ಮಕ್ಕಳನ್ನು ರೇಡಿಯೋ ಕಾರ್ಯಕ್ರಮಗಳಿಗೆ ತರಬೇತುಗೊಳಿಸಿ ಸಹಕರಿಸಿದರು. |