MSCHS Nirchal: MAHAJANA |
- ಚಾಂದ್ರ ದಿನ 2018
- ಚುನಾವಣೆ 2018
- ಏಳನೇ ತರಗತಿ ವಿದ್ಯಾರ್ಥಿಗಳಿಂದ CPCRI ಗೆ ಭೇಟಿ
- ರಸ್ತೆ ಸುರಕ್ಷಾ ತರಬೇತಿ
- ವಿವಿಧ ಸಂಘಗಳ ಉದ್ಘಾಟನೆ
- ಶಾಲೆಯ ಮುಂದೆ ಸುಂದರ ಗಾರ್ಡನ್
- ಯೋಗ ದಿನಾಚರಣೆ
Posted: 21 Jul 2018 03:46 AM PDT |
Posted: 21 Jul 2018 03:42 AM PDT ಶಾಲಾ ವಿದ್ಯಾರ್ಥಿ ಮಂಡಳಿಗೆ ನಾಯಕರ ಆಯ್ಕೆ ಪ್ರಕ್ರಿಯೆಯು ಪ್ರಜಾಪ್ರಭುತ್ವದ ವಿಧಾನದಂತೆಯೇ ಇಂದು ಜರಗಿತು. ಮೂರು ವಿವಿಧ ಕೇಂದ್ರಗಳಲ್ಲಿ ಇರಿಸಲಾದ ಮತಪೆಟ್ಟಿಗೆಗಳಲ್ಲಿ ವಿದ್ಯಾರ್ಥಿಗಳು ಮತ ಚಲಾಯಿಸಿದರು. ಮತದಾನದ ಕೊನೆಗೆ ಮತ ಎಣಿಕೆ ನಡೆದು ಶಾಲಾ ವಿದ್ಯಾರ್ಥಿ ನಾಯಕನಾಗಿ ಕೃಷ್ಣಪ್ರಸಾದ್, ಉಪ ನಾಯಕಿಯಾಗಿ ಅದಿತಿ.ಕೆ ಮತ್ತು ಗಾಯತ್ರಿ ಭಿತ್ತಿ ಪತ್ರಿಕೆಯ ಸಂಚಾಲಕನಾಗಿ ಲಿಖಿತ್ ಇವರನ್ನು ವಿಜಯಿಗಳೆಂದು ಘೋಷಿಸಲಾಯಿತು. ವಿಜೇತರಿಗೆ ಶುಭಾಶಯಗಳು... |
ಏಳನೇ ತರಗತಿ ವಿದ್ಯಾರ್ಥಿಗಳಿಂದ CPCRI ಗೆ ಭೇಟಿ Posted: 21 Jul 2018 01:36 AM PDT ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಮತ್ತು ನವೀನ ತಂತ್ರಜ್ಞಾನಗಳನ್ನು ಬಳಸಿ ಕೃಷಿ ವ್ಯವಸ್ಥೆಗಳನ್ನು ಹೆಚ್ಚು ಆಪ್ಯಾಯಮಾನಗೊಳಿಸುವ ನಿಟ್ಟಿನಲ್ಲಿ ಪರಿಚಯಾತ್ಮಕ ಸಂದರ್ಶನ ಚಟುವಟಿಕೆಗಳು ಅಗತ್ಯ ಎನ್ನುವುದನ್ನು ಗಮನದಲ್ಲಿರಿಸಿ ಶಾಲೆಗಳಲ್ಲಿ ಕೃಷಿ ಸಂದರ್ಶನ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಇಂದು ಸಿ.ಪಿ.ಸಿ.ಆರ್.ಐ ಕಾಸರಗೋಡನ್ನು ಸಂದರ್ಶಿಸಿದರು. ಸಿ.ಪಿ.ಸಿ.ಆರ್.ಐ ಯ ಹಿರಿಯ ತಾಂತ್ರಿಕ ಅಧಿಕಾರಿ ಮುರಳೀಕೃಷ್ಣ ಕಿಳಿಂಗಾರು ವಿದ್ಯಾರ್ಥಿಗಳಿಗೆ ಟಿಶ್ಯೂ ಕಲ್ಚರ್ ಕುರಿತು ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಮಣಿಕಂಠನ್ ಕಸಿಕಟ್ಟುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಟಿಶ್ಯೂ ಕಲ್ಚರ್ ಮತ್ತು ಕಸಿಕಟ್ಟುವಿಕೆಯ ಸೂಕ್ಷ್ಮಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ತಮ್ಮ ಅರಿವಿನ ವಿಸ್ತಾರವನ್ನು ಹೆಚ್ಚಿಸಿಕೊಂಡರು. ಸಮರ್ಪಕ ಅರಿವಿನೊಂದಿಗೆ ಕೃಷಿ ವಿಭಾಗದ ಗಣನೀಯ ಸಾಧನೆಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಸಂದರ್ಭ ಭರವಸೆಯ ನುಡಿಗಳನ್ನಾಡಿದರು. ಶಾಲಾ ಶಿಕ್ಷಕರಾದ ಗೋವಿಂದ ಶರ್ಮ.ಕೆ, ಜ್ಯೋತಿಲಕ್ಷ್ಮಿ.ಯಸ್, ಅವಿನಾಶ ಕಾರಂತ.ಯಂ, ಶೋಭಾ.ಕೆ.ಹಿರೇಮಠ್ ಮೊದಲಾದವರು ನೇತೃತ್ವ ನೀಡಿದರು. |
Posted: 21 Jul 2018 03:22 AM PDT ನಮ್ಮ ಶಾಲೆಯ ರಸ್ತೆ ಸುರಕ್ಷಾ ಕ್ಲಬ್ ನೇತೃತ್ವದಲ್ಲಿ ಇಂದು ರಸ್ತೆ ಜಾಗೃತಿಯ ಬಗ್ಗೆ ತಿಳುವಳಿಕಾ ತರಬೇತಿ ಜರಗಿತು. ಕಾಸರಗೋಡು ಆರ್.ಟಿ.ಒ ಕಛೇರಿಯ ಮೋಟಾರ್ ವೆಹಿಕಲ್ ಇನ್‍ಸ್ಪೆಕ್ಟರ್ ವಿಜಯನ್ ವೆಳ್ಳರಿಕುಂಡು ಇಂದು ಆಗಮಿಸಿ ಸ್ಲೈಡ್ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ರಸ್ತೆ ದಾಟುವಾಗ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಅಧ್ಯಕ್ಷತೆ ವಹಿಸಿದರು. |
Posted: 21 Jul 2018 01:46 AM PDT ನಮ್ಮ ಶಾಲೆಯಲ್ಲಿರುವ ವಿವಿಧ ವಿದ್ಯಾರ್ಥಿ ಸಂಘಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಇಂದು ಮಧ್ಯಾಹ್ನ ಜರಗಿತು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ವಿವಿಧ ಸಂಘಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ವಿವಿಧ ಕ್ಲಬ್ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ವಿಕಾಸಗೊಳಿಸಬೇಕು ಎಂದು ಹೇಳಿದರು. ಶಾಲಾ ಹಿರಿಯ ಶಿಕ್ಷಕಿ ಕೆ.ವಿನೋದಿನಿ ಶುಭ ಹಾರೈಸಿದರು. ವಿದ್ಯಾರ್ಥಿಗಳಾದ ಉತ್ತೇಶ್ ಕುಮಾರ್.ಟಿ ಸ್ವಾಗತಿಸಿ, ಆಶಾ.ಕೆ ವಂದಿಸಿದರು. ಅದಿತಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದಳು. |
Posted: 20 Jul 2018 11:35 PM PDT ನಮ್ಮ ಶಾಲೆಯ ಮುಂದೆ ಬದಿಯಡ್ಕದಿಂದ ಕುಂಬಳೆಗೆ ಸಾಗುವ ರಸ್ತೆಯ ಬದಿಯಲ್ಲಿಯೇ ಆಕರ್ಷಕ ಗಾರ್ಡನ್ ಸಿದ್ಧವಾಗಿದೆ. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆಯವರು ವಿಶೇಷ ಆಸ್ಥೆ ವಹಿಸಿ ಈ ಹೂದೋಟದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಒಂದು ಗ್ರಾಮೀಣ ಪ್ರದೇಶದಲ್ಲಿ ಪ್ರಯಾಣಿಕರ ಕಣ್ಮನಗಳನ್ನು ಸೆಳೆಯುತ್ತಿದೆ. ಈ ಹೋದೋಟ ನಿರ್ಮಾಣ ಪ್ರಕ್ರಿಯೆಯಲ್ಲಿ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು... |
Posted: 20 Jul 2018 11:31 PM PDT ಪತಂಜಲಿ ಯೋಗ ವಿದ್ಯಾಪೀಠದ ಆಶ್ರಯದಲ್ಲಿ ಕಳೆದ ಹದಿನೈದು ದಿನಗಳಿಂದ ನಮ್ಮ ಶಾಲೆಯಲ್ಲಿ ಯೋಗ ತರಬೇತಿ ಜರಗುತ್ತಿದ್ದು ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಳಗ್ಗೆ ಸಭಾ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಕಾಸರಗೋಡು ಜಿಲ್ಲಾಧಿಕಾರಿಗಳಾದ ಕೆ.ಜೀವನ್ ಬಾಬು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಡಿ.ಶಂಕರ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಜರಗಿತು. |
You are subscribed to email updates from Kumbla11039: MSCHSS Nirchal. To stop receiving these emails, you may unsubscribe now. | Email delivery powered by Google |
Google, 1600 Amphitheatre Parkway, Mountain View, CA 94043, United States |
No comments:
Post a Comment