Posted: 11 Jan 2016 06:50 AM PST ಸಾಮಾಜಿಕ ಸಮಾನತೆಯಿಂದ ನಾಡಿನ ಪುರೋಗತಿ ಸಾಧ್ಯ. ಮಾಣಿಮೂಲೆ ಜನವರಿ 11, ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರಿಗೆ ಯೋಗ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಬೇಕು ಆಗ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರುತ್ತಾರೆ ಇದರಿಂದ ನಾಡಿನ ಅಭಿವೃದ್ದಿಗೆ ಹಾದಿ ಸಲೀಸಾಗುತ್ತದೆ, ಆದುದರಿಂದ ಸಮಾಜ ಸೇವಾಕಾಂಕ್ಷಿಗಳೆಲ್ಲರೂ ಈ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿ ಅನುಷ್ಠಾನಕ್ಕೆ ತರಬೇಕು ಎಂದು ಕುತ್ತಿಕ್ಕೋಲು ಗ್ರಾ ಪಂಚಾಯತ್ ಮಾಣಿಮೂಲೆ ವಾರ್ಡ್ ಸದಸ್ಯೆ ಧರ್ಮಾವತಿ ನುಡಿದರು. ಅವರು ಜಿ.ಎಲ್.ಪಿ.ಶಾಲೆ ಮಾಣಿಮೂಲೆ ಶಾಲೆಗೆ ಗೋತ್ರಸಾರಥಿ ಯೋಜನೆಯನ್ವಯ ಏರ್ಪಡಿಸಲಾದ ವಾಹನ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ತಡಿಚ್ಚಿಲಂಪಾರೆ ಮತ್ತು ಚೂಲಂಗಲ್ಲು ಪ್ರದೇಶಗಳಿಂದ ಪರಿಶಿಷ್ಟ ವರ್ಗ ವಿದ್ಯಾರ್ಥಿಗಳಿಗಾಗಿ ಸಮಾಜ ಕ್ಷೇಮಾಭಿವೃದ್ದಿ ಇಲಾಖೆಯಿಂದ ವಾಹನದ ವ್ಯವಸ್ಥೆ ಯನ್ನು ರಕ್ಷಕ ಶಿಕ್ಷಕ ಸಂಘ ಅಪೇಕ್ಷಿಸಿತ್ತು. ಇದರಿಂದ ಶಾಲೆಗೆ ಗೈರಿಹಾಜರಾಗುವ ಮಕ್ಕಳ ಸಂಖ್ಯೆ ಇನ್ನಿಲ್ಲದಾಗುವುದು. ಉಪಾಧ್ಯಕ್ಷರಾದ ಬಿಜು, ಪ್ರೊಮೋಟರ್ ಮಾಧವಿ, ಜಗಧೀಶನ್, ಅನಿತಾ ಕುಮಾರಿ ಉಪಸ್ಥಿತರಿದ್ದರು.ಶಾಲೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ ವಿಷಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸ್ಟಾಫ್ ಕಾರ್ಯದರ್ಶಿ ಸೀತಾರಾಮ್ ಒ ವಂದಿಸಿದರು.
|
Posted: 11 Jan 2016 06:41 AM PST 09-01-2015 ಏರ್ ರೈಸ್ ಆರ್ಟ್ಸ್ ಏಂಡ್ ಸ್ಪೋರ್ಸ್ಸ್ ಕ್ಲಬ್ ಮಾಣಿಮೂಲೆ- ವಾರ್ಷಿಕೋತ್ಸವ.
ಮಾಣಿಮೂಲೆಃಆರೋಗ್ಯಪೂರ್ಣ ಶರೀರದಲ್ಲಿ ಅರೋಗ್ಯಕರವಾದ ಚಿಂತನೆಗಳು ಮೂಡುತ್ತವೆ. ಇವು ಸಮಾಜದಲ್ಲಿಸ್ವಾಸ್ಥ್ಯಜೀವನಕ್ಕೆ ಪೂರಕ. ಯಾವುದೇ ಜಾತಿ,ಭಾಷೆ,ರಾಜಕೀಯವಿಲ್ಲದೆ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಸಂಘಗಳು ಉತ್ತಮ ಸಮಾಜದ ನಿರ್ಮಾಣದ ಅಡಿಗಲ್ಲು. ಯುವಪೀಳಿಗೆಯವರನ್ನು ಪ್ರೋತ್ಸಾಹಿಸುವ ಸಂಘಟನೆಗಳು ಸಮಾಜಕ್ಕೆ ಉತ್ತಮ ಮಾರ್ಗದರ್ಶನವನ್ನು ನೀಡುವಂತಾಗಲಿ ಎ೦ಬ ಸಂದೇಶದೊಂದಿಗೆ ಮಾಣಿಮೂಲೆ ಶಾಲಾ ವಠಾರದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಲಾಯಿತು. ಏರ್ ರೈಸ್ ಆರ್ಟ್ಸ್ ಏಂಡ್ ಸ್ಪೋರ್ಟ್ಸ್ ಕ್ಲಬ್ಬ್ ಮಾಣಿಮೂಲೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಇದನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷರಾದ ವಿ.ಕೆ.ಕುಮಾರನ್ ವಹಿಸಿದ್ದರು. ಕೆ.ಆರ್.ವೇಣು, ನೀಲಕಂಠನ್, ಭೋಜಪ್ಪ ಗೌಡ, ವಿಜಯಕುಮಾರ್ ಪಾಲಾರ್, ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕೆ.ಎ೦.ಕುಮಾರನ್,ಗೋಪಾಲನ್ ಶುಭಾಶಂಸನೆಗೈದರು. ಕೇರಳೋತ್ಸವದಲ್ಲಿ ಬಹುಮಾನ ಗಳಿಸಿದ ಕ್ಲಬ್ಬಿನ ಸದಸ್ಯರಾದ ಅನೀಶ್ ಮತ್ತು ಇಕ್ಬಾಲ್ ಇವವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ವಿಜೇಶ್ ಸ್ವಾಗತಿಸಿ, ಅನೀಶ್ ಟಿ.ಆರ್ ವಂದಿಸಿದರು. ವಿ.ಕುಮಾರ್ ನಿರೂಪಣೆಗೈದರು |