MSCHS Nirchal: MAHAJANA

MSCHS Nirchal: MAHAJANA


ಶ್ರೀಕೃಷ್ಣ ಜಯಂತಿ ಉತ್ಸವ 2015

Posted: 05 Sep 2015 12:58 AM PDT




"ಮಹಾಭಾರತದಲ್ಲಿ ಮಹಾಮಹಿಮನಾದ ಶ್ರೀಕೃಷ್ಣನ ಪಾತ್ರ ಅತ್ಯಂತ ಹೆಚ್ಚು ಪ್ರಧಾನವಾದದ್ದು. ಆತ ಯೋಗ ಪುರುಷ. ಎಲ್ಲೂ ಯುದ್ಧದಲ್ಲಿ ನೇರವಾಗಿ ಭಾಗವಹಿಸಿದವನಲ್ಲ. 'ಅಹಂ' ಅನ್ನು ಅಳಿಸಿ ದೇವರನ್ನೇ ಶರಣು ಎಂದವರನ್ನು ಕೈಬಿಟ್ಟವನೂ ಅಲ್ಲ. ಆದರೆ ಆತ ಚತುರ, ರಾಜಕಾರಣಿ, ಧರ್ಮಶಾಸ್ತ್ರ ಕೋವಿದ. ಸಾಂದರ್ಭಿಕವಾಗಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆ. ಕೃಷ್ಣ ಮತ್ತು ಡಾ|ರಾಧಾಕೃಷ್ಣ ಇವರ ಜನ್ಮದಿನಗಳು ಒಂದೇ ದಿನ ಬಂದಿರುವುದು ಈ ವರ್ಷದ ವಿಶೇಷ. ಹೀಗೆ ಲೋಕಕಲ್ಯಾಣಕ್ಕಾಗಿ ಅವತಾರವೆತ್ತಿದ ಮಹಾಪುರುಷರ ಜನ್ಮದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ತಂದುಕೊಡುತ್ತದೆ" ಎಂದು ನಿವೃತ್ತ ಮುಖ್ಯೋಪಾಧ್ಯಾಯ ಕುಳಮರ್ವ ಕೇಶವಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ 'ವಿದ್ಯೋದಯ ಸಭಾ' ಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ಜರಗಿದ 'ಶ್ರೀಕೃಷ್ಣ ಜಯಂತಿ' ಉತ್ಸವ ಮತ್ತು ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ರಮ್ಯಾ.ಕೆ ವರದಿ ವಾಚಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರೋಜೆಕ್ಟ್‌ನಲ್ಲಿ ನೋಂದಾವಣೆಗೊಂಡ ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿ ಕಳತ್ತೂರು  ಇವರಿಂದ ದಾಸ ಸಂಕೀರ್ತನೆ ಕಾರ್ಯಕ್ರಮ ಜರಗಿತು.

ರಕ್ಷಕ ಶಿಕ್ಷಕ ಸಂಘದ ಮಹಾಸಭೆ 2015

Posted: 04 Sep 2015 04:39 AM PDT


"ನೀರ್ಚಾಲಿನ ಗ್ರಾಮೀಣ ಪರಿಸರದಲ್ಲಿ ಬೆಳೆದು ಬಂದ ಮಹಾಜನ ವಿದ್ಯಾಲಯವು ಈಗ ಪುನ: ಹೈಯರ್ ಸೆಕೆಂಡರಿ ವಿಭಾಗದ ತನಕ ಬೆಳೆದಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗಾಗಿ ತಕ್ಷಣವೇ ಶಾಲಾ ವಾಹನವನ್ನು ಖರೀದಿಸಿ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ನೀಡಲಿದ್ದೇವೆ." ಎಂದು ನಮ್ಮ ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು 04.09.2015 ಶುಕ್ರವಾರ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ, ರಕ್ಷಕ ಶಿಕ್ಷಕ ಸಂಘದ ಮಾತೃ ವಿಭಾಗದ ಅಧ್ಯಕ್ಷೆ ಫೌಝಿಯಾ ಮತ್ತು ಪರಮೇಶ್ವರಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ ವರದಿ ವಾಚಿಸಿದರು. ಶಿಕ್ಷಕರಾದ ಎಚ್.ಸೂರ್ಯನಾರಾಯಣ ವಂದಿಸಿದರು. ಶಿವಪ್ರಕಾಶ್. ಎಂ.ಕೆ ಕಾರ್ಯಕ್ರಮ ನಿರೂಪಿಸಿದರು.

SARVA SHIKSHA ABHIYAN - ബി.ആര്‍.സി.ബേക്കല്‍ PH: 0467-2238351, E-MAIL-brcbekal@gmail.com

കക്കാട്ട്

കക്കാട്ട്


പുരസ്കാര പത്രങ്ങൾ

Posted: 04 Sep 2015 02:03 AM PDT



11027 GHSS BANDADKA

Gupshosdurgkadappuram

Gupshosdurgkadappuram


TEACHERS DAY

Posted: 04 Sep 2015 09:32 AM PDT

അധ്യാപക ദിനാഘോഷം ഇന്ന് സ്കൂളിൽ ആചരിച്ചു. Dr.S.Radhakrishnan അനുസ്മരണപ്രഭാഷണവും, സ്കൂളിലെ അധ്യാപികാ അധ്യാപകരെ കുട്ടികൾ  പൂക്കൾ നല്കി ആദരിക്കുകയുംചെയ്യുന്ന ചടങ്ങുകളും  സംഘടിപ്പിച്ചു.