MSCHS Nirchal: MAHAJANA |
Posted: 03 Aug 2018 04:03 AM PDT ನಮ್ಮ ಶಾಲೆಗೆ ಹೊಸತಾಗಿ ಕಾಲಿರಿಸಿದವಿದ್ಯಾರ್ಥಿಗಳು ಪ್ರಾಚೀನ ವಸ್ತುಗಳ ಕಡೆಗೆಗಮನ ನೀಡಿ ಅದನ್ನು ಅಕ್ಕರೆಯಿಂದಶಾಲೆಗೆ ಹೊತ್ತು ತಂದು ತರಗತಿಯಲ್ಲಿಪ್ರದರ್ಶಿಸಿ ಸಂತಸ ಪಟ್ಟರು. ಆಧುನಿಕಉಪಕರಣಗಳ ಉಪಯೋಗವೇ ಅಧಿಕವಾಗಿರುವ ಈಕಾಲದಲ್ಲಿ ಹಳೆಯ ಕಾಲದ ನಾಣ್ಯ, ಅಳತೆಪಾತ್ರೆಗಳು, ದೀಪ, ಮರದ ಪಾದುಕೆ, ಗಿಂಡಿ, ಸ್ಟ್ಯಾಂಪ್, ಮಡಕೆಮುಂತಾದವುಗಳು ಮಕ್ಕಳಲ್ಲಿ ಕುತೂಹಲವನ್ನು ಹೆಚ್ಚಿಸಿದವು. ಶಿಕ್ಷಕಿಜ್ಯೋತಿಲಕ್ಷ್ಮಿ.ಯಸ್ ಇವರ ನೇತೃತ್ವದಲ್ಲಿನಡೆದ ವಸ್ತುಪ್ರದರ್ಶನ ಮಕ್ಕಳಲ್ಲಿ ಬಹಳ ಕಾಲ ನೆನಪಿನಲ್ಲಿಉಳಿಯುವ ಕಾರ್ಯಕ್ರಮವಾಗಿತ್ತು. |
ಶಾಲಾ ತರಕಾರಿ ತೋಟಕ್ಕೆ ಕೃಷಿಭವನದ ಅಧಿಕಾರಿಗಳಿಂದ ಭೇಟಿ Posted: 03 Aug 2018 04:01 AM PDT ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕ ಕೋರಿಕ್ಕಾರು ಗೋವಿಂದ ಶರ್ಮರ ನೇತೃತ್ವದಲ್ಲಿ ಇಕೋ ಕ್ಲಬ್ ನ ಸದಸ್ಯರು ನಿರ್ಮಿಸಿರುವ ಶಾಲಾ ತರಕಾರಿ ತೋಟಕ್ಕೆ ಬದಿಯಡ್ಕ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿಗಳಾದ ಉಣ್ಣಿ ಕೃಷ್ಣನ್ ಮತ್ತು ರಾಧಾಕೃಷ್ಣನ್ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು. ಇಕೋ ಕ್ಲಬ್ ನ ವಿದ್ಯಾರ್ಥಿಗಳಿಗೆ ತರಕಾರಿ ಗಿಡಗಳಿಗೆ ಬಾಧಿಸುವ ರೋಗಗಳ ಬಗ್ಗೆ ಮತ್ತು ಅದನ್ನು ನಿವಾರಿಸುವ ಕುರಿತಾಗಿ ಸೂಕ್ತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ವಾಣಿ ಪಿ ಯಸ್, ಅವಿನಾಶ ಕಾರಂತ.ಯಂ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟರಾಜ ಸಿ.ಯಚ್ ಸ್ವಾಗತಿಸಿ ಶಿಕ್ಷಕರಾದ ಕೃಷ್ಣಪ್ರಸಾದ.ಟಿ ವಂದಿಸಿದರು. |
You are subscribed to email updates from Kumbla11039: MSCHSS Nirchal. To stop receiving these emails, you may unsubscribe now. | Email delivery powered by Google |
Google, 1600 Amphitheatre Parkway, Mountain View, CA 94043, United States |
No comments:
Post a Comment