MSCHS Nirchal: MAHAJANA

MSCHS Nirchal: MAHAJANA


ನಾಳೆ ಕುಂಬಳೆ ಉಪಜಿಲ್ಲಾ ಕಲೋತ್ಸವ ಉದ್ಘಾಟನೆ

Posted: 01 Nov 2017 06:30 AM PDT


ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವು 31.10.2017 ರಂದು ಧ್ವಜಾರೋಹಣದೊಂದಿಗೆ ಆರಂಭವಾಗಿದ್ದು, ನಾಳೆ 02.11.2017 ರಂದು ಅಪರಾಹ್ನ 4.00 ಗಂಟೆಗೆ ಔಪಚಾರಿಕವಾಗಿ ಉದ್ಘಾಟನೆಗೊಳ್ಳಲಿದೆ. 31.10.2017 ಮತ್ತು 01.11.2017 ರಂದು ವೇದಿಕೆಯೇತರ ಸ್ಪರ್ಧೆಗಳು ನಡೆದಿದ್ದು, 02.11.2017 ರಿಂದ 04.11.2017 ರ ತನಕ ಗಂಗಾ, ಯಮುನ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ, ನೇತ್ರಾವತಿ ಮತ್ತು ಪಯಸ್ವಿನಿ ವೇದಿಕೆಗಳು ನಾಟ್ಯ, ನಾಟಕ, ಯಕ್ಷಗಾನಗಳಿಗೆ ವೇದಿಕೆಯಾಗಲಿವೆ. 01.11.2017ರಂದು ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್.ಎಂ ಉದ್ಘಾಟಿಸಿದರು.

02.11.2017 ರಂದು ಅಪರಾಹ್ನ 4.00 ಗಂಟೆಗೆ ಗಂಗಾ ಸಭಾಂಗಣದಲ್ಲಿ ಜರಗುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಸರಗೋಡಿನ ಶಾಸಕ ಎನ್.ಎ.ನೆಲ್ಲಿಕುನ್ನು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಕಾಸರಗೋಡು ಜಿಲ್ಲಾ ಪಂಚಾಯತು ಅಧ್ಯಕ್ಷ ಎ.ಜಿ.ಸಿ ಬಶೀರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲೆಯ ಪೂರ್ವ ವಿದ್ಯಾರ್ಥಿಗಳಾದ ಮಂಗಳೂರಿನ ಡಿವೈ ಎಸ್ ಪಿ ಎಂ.ರಾಮಚಂದ್ರ ನಾಯಕ್, ಮುಂಬೈ ಐಐಟಿಯ ವಿಜ್ಞಾನಿ ಡಾ|ಮಹೇಶ ಕುಳಕ್ಕೋಡ್ಳು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರಡ್ಕ ಬ್ಲೋಕ್ ಪಂಚಾಯತು ಅಧ್ಯಕ್ಷೆ ಶ್ರೀಮತಿ ಓಮನಾ ರಾಮಚಂದ್ರನ್, ಮಂಜೇಶ್ವರ ಬ್ಲೋಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ.ಕೆ.ಎಲ್, ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀಮತಿ ಅರುಣಾ. ಜೆ, ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ರೂಪವಾಣಿ.ಆರ್.ಭಟ್, ದೇಲಂಪಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಮುಸ್ತಫ, ಕಾಸರಗೋಡು ಜಿಲ್ಲಾ ಪಂಚಾಯತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾನವಾಸ್ ಪಾದೂರು, ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯ ಶ್ರೀಕಾಂತ್, ಕಾಸರಗೋಡು ಬ್ಲೋಕ್ ಪಂಚಾಯತು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಸ್.ಅಹಮ್ಮದ್, ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಡಾ|ಗಿರೀಶ್ ಚೋಲಯಿಲ್, ಕಾಸರಗೋಡು ಶಿಕ್ಷಕ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ|ಕೆ.ಎಂ.ಉಣ್ಣಿಕೃಷ್ಣನ್, ಹೈಯರ್ ಸೆಕೆಂಡರಿಯ ಕಾಸರಗೋಡು ಜಿಲ್ಲಾ ಸಹಾಯಕ ಸಂಯೋಜಕ ರವೀಂದ್ರನ್.ಪಿ, ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಸೈಬುನ್ನೀಸಾ, ಬದಿಯಡ್ಕ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮುಹಮ್ಮದ್ ಹನೀಫ ಓಝೋನ್, ಬದಿಯಡ್ಕ ಗ್ರಾಮ ಪಂಚಾಯತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ, ಬದಿಯಡ್ಕ ಗ್ರಾಮ ಪಂಚಾಯತು ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶಬಾನಾ.ಎಸ್, ಕಾಸರಗೋಡು ಬ್ಲೋಕ್ ಪಂಚಾಯತು ಸದಸ್ಯ ಅವಿನಾಶ್.ವಿ.ರೈ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಶಂಕರ.ಡಿ, ಶ್ರೀಮತಿ ಪ್ರೇಮಕುಮಾರಿ, ಶ್ರೀಮತಿ ಅನಿತಾ ಕ್ರಾಸ್ತಾ, ಮುನೀರ್, ಶ್ರೀಮತಿ ಜಯಂತಿ, ಕೆ.ವಿಶ್ವನಾಥ ಪ್ರಭು, ಬದಿಯಡ್ಕ ಗ್ರಾಮ ಪಂಚಾಯತು ಸಿ.ಡಿ.ಎಸ್ ಅಧ್ಯಕ್ಷೆ ಶ್ರೀಮತಿ ಪ್ರೇಮಾ ಗಣೇಶ್, ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಪ್ರಭಾರ ಶಿಕ್ಷಣಾಧಿಕಾರಿ ನಂದಲಾಲ್ ಭಟ್.ಪಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ವಿಭಾಗದ ಪ್ರೋಜೆಕ್ಟ್ ಆಫೀಸರ್ ಶ್ರೀಮತಿ ಪುಷ್ಪ.ಕೆ.ವಿ, ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಪ್ರೋಜೆಕ್ಟ್ ಆಫೀಸರ್ ವೇಣುಗೋಪಾಲ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ.ಕೆ, ನೀರ್ಚಾಲು ಸೊಸೈಟಿಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ನೀರ್ಚಾಲು ಕ್ಷೀರೋತ್ಪಾದಕ ಸಂಘದ ಅಧ್ಯಕ್ಷ ವೆಂಕಟಕೃಷ್ಣ ಭಟ್ ಪೆರ್ವ, ನೀರ್ಚಾಲು ಕರ್ನಾಟಕ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಶ್ರೀಶ.ಕೆ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ, ಕಾಸರಗೋಡು ಐ ಟಿ ಎಟ್ ಸ್ಕೂಲ್ ಸಂಯೋಜಕ ರಾಜೇಶ್.ಎಂ.ಪಿ, ಕುಂಬಳೆ ಬ್ಲೋಕ್ ಪ್ರೋಗ್ರಾಮ್ ಆಫೀಸರ್ ಕುಞಿಕೃಷ್ಣನ್, ಪಂಚಾಯತು ವಿದ್ಯಾಭ್ಯಾಸ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಲಲಿತಾಂಬಿಕಾ.ಎ, ಕುಂಬಳೆ ಉಪಜಿಲ್ಲಾ ಹೆಡ್ ಮಾಸ್ಟರ್ಸ್ ಫೋರಂ ನ ಸಂಚಾಲಕ ವಿಷ್ಣುಪಾಲ.ಬಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್.ಎಂ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಎಸ್.ನಾರಾಯಣ ಮತ್ತು ಉದಯ ಕಂಬಾರು, ಶಾಲಾ ಮಾತೃ ಸಂಘದ ಅಧ್ಯಕ್ಷೆಯರಾದ ಶ್ರೀಮತಿ ಜಯ.ಎಸ್.ಭಟ್ ಮತ್ತು ಶ್ರೀಮತಿ ಸ್ಮಿತ.ಎಸ್.ಶರ್ಮ, ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಸುಪ್ರೀತಾ.ಪಿ ಮತ್ತು ಉಪನಾಯಕ ಉತ್ತೇಶ್ ಕುಮಾರ್.ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಲಿದ್ದಾರೆ.

ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸ್ವಾಗತ ಮತ್ತು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಧನ್ಯವಾದ ಸಮರ್ಪಿಸಲಿದ್ದಾರೆ.

No comments:

Post a Comment